ಹೀಗೊಂದು ಕತೆ ನಡೆದಿತ್ತು :
ನನ್ನ ತಂಗಿ ಹುಟ್ಟುವಾಗ ನನಗೆ 5 ವರ್ಷ . ಆವಾಗಲೇ ಬಹಳ ತಂಟೆ ತುಕ್ರಿಯಾದ ನನ್ನನ್ನು ಸಂಭಾಳಿಸಲು ನನ್ನ ಮೃದು ಸ್ವಭಾವದ ನನ್ನ ಅಜ್ಜಿಗೆ (ನನ್ನಮ್ಮನ ಅಮ್ಮನಿಗೆ) ಖಂಡಿತವಾಗಿಯೂ ಸಾಧ್ಯವಾಗುತ್ತಿರಲಿಲ್ಲ. ಮೊದಲೇ ನಾನು ಅವರ ಮೊದಲನೇ ಮೊಮ್ಮಗಳಾದದ್ದರಿಂದ ನನ್ನ ಅಮ್ಮನ ಮನೆಯಲ್ಲಿ ಎಲ್ಲರೂ ನನ್ನನ್ನು ತುಂಬ ಮುದ್ದಿನಿಂದ ನೋಡಿಕೊಳ್ಳುತ್ತಿದ್ದರು. ಅಜ್ಜಿ, ಅಜ್ಜ, ಚಿಕ್ಕಮ್ಮನವರು , ಮಾವಂದಿರು ಎಲ್ಲರ ಮುದ್ದಿನ ಮಗು ನಾನಾಗಿದ್ದೆ (ಈಗಲೂ ಕೂಡಾ ). ಅದಕ್ಕೆಂದೇ ನಾನೆಷ್ಟೇ ಅತ್ತು ಕರೆದು ರಂಪ ಮಾಡಿದ್ದರೂ ನನ್ನ ಅಜ್ಜ ನನ್ನನ್ನು ನನ್ನ ಅಮ್ಮ ಮತ್ತು ತಂಗಿಯನ್ನು ನೋಡಲು ಆಸ್ಪತ್ರೆಗೆ ಕರೆದೊಯ್ದಿರಲಿಲ್ಲ.
ಒಂದು ದಿನ ಬಹಳ ರಂಪ ಮಾಡಿದ್ದಕ್ಕೆ ಕರೆದುಕೊಂಡು ಹೋಗಿದ್ದರಂತೆ . ಆ ದಿನ ನಾನು ನನ್ನಮ್ಮ ಮತ್ತು ನನ್ನ ತಂಗಿಯನ್ನು ಬಿಟ್ಟು ಬರಲು ಕೇಳಲೇ ಇಲ್ಲವಂತೆ.
ಕೊನೆಗೂ ನನ್ನಜ್ಜ ತನ್ನೆಲ್ಲಾ ಶಕ್ತಿ ಉಪಯೋಗಿಸಿ ನನ್ನನ್ನು ಆಸ್ಪತ್ರೆಯಿಂದ ಹೊರಗೆ ಕರೆದುಕೊಂಡು ಬಂದರಂತೆ. ರಸ್ತೆಯಲ್ಲಿ ನಾನವರ ಕೈಯಿಂದ ತಪ್ಪಿಸಿಕೊಳ್ಳಲು ಕೊಸರಿಕೊಳ್ಳುತ್ತಿದ್ದಾಗ ನನ್ನನ್ನು ದರ ದರ ಮಾರ್ಗದಲ್ಲಿ ಎಳೆದು ಕೊಂಡು ಹೋದರಂತೆ.
ಆಗ ನಾನು ನನ್ನಜ್ಜನಿಗೆ ನೀವೀಗ ನನ್ನನ್ನು ಅಮ್ಮನಲ್ಲಿ ಬಿಡದಿದ್ದರೆ ಅಲ್ಲೇ ಇದ್ದ ಪೋಲೀಸನ್ನು ತೋರಿಸಿ ಈಗ ನಿಮಗೆ ಪೋಲಿಸಿನ ಬಳಿ ಹೇಳಿ ನಿಮ್ಮನ್ನು ಜೈಲಿಗೆ ಹಾಕಿಸುತ್ತೇನೆಂದು ಬೆದರಿಕೆಯೊಡ್ಡಿದ್ದೆನಂತೆ.(ಯಾರೋ ಟ್ರಾಫಿಕ್ ಪೋಲಿಸ್ ಇರಬೇಕು !). ಆ ವಿಚಾರವನ್ನು ಇಂದಿಗೂ ಹೇಳಿ ನನ್ನಜ್ಜ ನನಗೆ ಮೂದಲಿಸುತ್ತಾರೆ. ತದ ನಂತರ ನನ್ನನ್ನು ಅಮ್ಮ ಮನೆಗೆ ಬರುವ ತನಕ ಅಮ್ಮನನ್ನು ತಂಗಿಯನ್ನು ನೋಡಲು ಯಾರೂ ಆಸ್ಪತ್ರೆಗೆ ಕರೆದೊಯ್ಯಲಿಲ್ಲ. ನನ್ನ ಜೀವನದಲ್ಲಿ ನನ್ನ ತಂಗಿ ಹುಟ್ಟಿದಂದಿನ ನಂತರ ನಾನು ಮತ್ತೆ, ಹುಟ್ಟಿದ ಮಗುವನ್ನು ನೋಡಲು ಆಸ್ಪತ್ರೆಗೆ ಹೋದದ್ದು ಪ್ರಥಮ ಪಿ .ಯು.ಸಿ ಯಲ್ಲೇ.
ಇದು ಸುಮಾರು 6 ವರ್ಷಗಳ ಹಿಂದೆ ನಡೆದ ಕಥೆ. ಅಂದು ತಾರೀಕು ಡಿಸೆಂಬರ1.ಆಗ ನಾನು ಪ್ರಥಮ PUC ಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದೆ.
ನಾನು ನನ್ನ ಕ್ಲಾಸ್ ಮೇಟ್ ಇಬ್ಬರೂ ತರಗತಿ ಮುಗಿದ ನಂತರ ಅವಳ ಅತ್ತೆಗೆ ಆಗ ತಾನೇ ಹುಟ್ಟಿದ ಮಗುವನ್ನು ನೋಡಿ ಬರಲೆಂದು ಉಡುಪಿಯ ಟಿ. ಎಂ .ಎ .ಪೈ ಆಸ್ಪತ್ರೆಗೆ ತೆರಳಿದೆವು. ನನಗೆ ಬುದ್ಧಿ ತಿಳಿದಂದಿನಿಂದ ಬರೇ ಬೆಕ್ಕಿನ ಮರಿಗಳನ್ನೇ ನೋಡಿ ಬೆಳೆದವಳು . ನಮ್ಮ ಮನೆಯಲ್ಲಿ ಬಹಳ ಬೆಕ್ಕಿನ ಮರಿಗಳಿದ್ದವು. ಅಲ್ಲದೆ ಯಾರಾದರೂ ಸಂಬಂಧಿಕರೊಳಗೆ ಹೆರಿಗೆಯಾದರೆ ಮನೆಯ ಹಿರಿಯರೇ ನೋಡಿ ಬರುತ್ತಿದ್ದರೇ ಹೊರತು ಸಣ್ಣ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಕ್ರಮ ಇರಲಿಲ್ಲ.
ನಾನು ಮತ್ತು ನನ್ನ ಸ್ನೇಹಿತೆ ಇಬ್ಬರೂ ಆಸ್ಪತ್ರೆಗೆ ತೆರಳಿ ಅವಳ ಅತ್ತೆಯಿದ್ದ ವಾರ್ಡಿಗೂ ಹೋದೆವು. ಅವಳ ಅತ್ತೆ ಮಲಗಿದ್ದರು. ಮಗುವನ್ನು ನಾವು ಹೋಗಿ ಸ್ವಲ್ಪ ಹೊತ್ತಿನ ಬಳಿಕ ದಾದಿಯೊಬ್ಬರು ವಾರ್ಡಿಗೆ ತಂದರು . ಅಲ್ಲಿ ನನ್ನ ಸ್ನೇಹಿತೆಯ ಅಜ್ಜಿ , ಅಮ್ಮ. ಮಾವ ಮತ್ತೆ ಕೆಲವು ಹತ್ತಿರದ ಸಂಬಂಧಿಕರು ಇದ್ದರು. ನನ್ನ ಸ್ನೇಹಿತೆ ಮಗುವಿನ ಬಳಿಗೆ ನನ್ನನ್ನೂ ಕರೆದಳು . ಹತ್ತಿರ ಹೋದವಳೇ ಮಗುವನ್ನು ನೋಡುತ್ತಿದ್ದಂತೆ ನನಗರಿವಿಲ್ಲದಂತೇ ಉಸುರಿದೆ.
ಓಹ್ ! ಮಗು ಹುಟ್ಟಿದ ಕೂಡಲೇ ಕಣ್ಣು ತೆರೆಯುತ್ತದೆಯಾ ?? ಆಗಷ್ಟೇ ಎದ್ದು ಕುಳಿತ ಮಗುವಿನ ತಾಯಿಯಿಂದ ಹಿಡಿದು ಎಲ್ಲರೂ ಗೊಳ್ ಎಂದು ನಗಲಾರಂಭಿಸಿದರು. ಎಲ್ಲರೂ ಬಿದ್ದು ಬಿದ್ದು ನಗುತ್ತಿದ್ದಾರೆ . ನಾನೇನು ಅಂಥದ್ದು ಹೇಳಿದೆ ಎಂದು ಇವರೆಲ್ಲಾ ನಗುತ್ತಿದ್ದಾರೆ? ಎಂಬುದನ್ನು ಉಹಿಸಲೇ ಕೊಂಚ ಕ್ಷಣ ಕಳೆಯಿತು.ಈ ನಗುವಿನ ನಡುವೆಯೂ ಮಗುವಿನ ತಾಯಿ ಅದೇನು ಬೆಕ್ಕಿನ ಮರಿಯೆಂದು ಅಂದುಕೊಂಡಿದ್ದೀಯೇನೇ ? ಎಂದು ಕೇಳಿದ್ದರು. ನಿಜವಾಗಿಯೂ ನನಗೆ ಅಂದಿನವರೆಗೂ ಮಗು ಹುಟ್ಟಿದ ಕೂಡಲೇ ಕಣ್ಣು ತೆರೆಯುತ್ತದೆ ಎಂಬ ಸತ್ಯ ತಿಳಿದಿರಲೇ ಇಲ್ಲ. ಮಹಾ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ಅದರಲ್ಲೂ ಜೀವ ಶಾಸ್ತ್ರದ ವಿದ್ಯಾರ್ಥಿನಿಯಾಗಿದ್ದ ನನ್ನ ಜಂಬವೆಲ್ಲಾ ಒಂದು ನಿಮಿಷದಲ್ಲಿ ಮಾಯವಾಗಿತ್ತು. ಒಂದು ಕಡೆ ಮನದೊಳಗೆ ಕಸಿವಿಸಿ ಇನ್ನೊಂದು ಕಡೆ ಬೇಸರ, ಸ್ವಲ್ಪ ಅವಮಾನ ಎಲ್ಲವನ್ನೂ ಅನುಭವಿಸಿದ್ದೆ. ಅಷ್ಟೇ ಅಲ್ಲದೆ ನನ್ನ ಸ್ನೇಹಿತೆಯ ಸಂಬಂಧಿಕರು ನನಗೂ ದೂರದ ಸಂಬಂಧಿಕರು ಎಂಬುದನ್ನು ತಿಳಿದಾಗ ಇನ್ನು ಸ್ವಲ್ಪ ಜಾಸ್ತಿಯೇ ದುಃಖವಾಗಿತ್ತು . ಆದರೂ ಅವರೊಂದಿಗೆ ಅಂದು ನಾನೂ ನಕ್ಕು ಅಂದಿನ ದಿನವನ್ನು ಹೇಗೋ ಸಂಭಾಳಿಸಿ ಬಂದಿದ್ದೆ. ಇದನ್ನು ಮುಗ್ಧತೆ ಎನ್ನಬೇಕೋ? ನನ್ನ ಪೆದ್ದುತನದ ಪರಮಾವಧಿ ಎನ್ನಬೇಕೋ ನನಗಿನ್ನೂ ತಿಳಿದಿಲ್ಲ. ಮನೆಗೆ ಬಂದು ಅಜ್ಜಿಯ ಬಳಿ ಹೇಳಿದಾಗ ಅವರೂ ಅಯ್ಯೋ ಪೆದ್ದು ಮುಂಡೇದೆ ಅಂಥ ಅಜ್ಜಿಯೂ ಬಿದ್ದು ಬಿದ್ದು ನಕ್ಕಿದ್ದು ನನಗಿನ್ನೂ ನೆನಪಿದೆ.
ಈ ಎಲ್ಲಾ ವಿಚಾರಗಳು ಎಂದಿಗೂ ಮರೆಯಲಾಗದ್ದು. ಇಂದಿಗೂ ಯಾರಾದರೂ ಫ್ರೆಂಡ್ಸ್ ನನ್ನಲ್ಲಿ ನಿನ್ನ ಜೀವನದಲ್ಲಿ ಮರೆಯಲಾಗದ ದಿನ/ ಘಟನೆ ಯಾವುದೆಂದು ಕೇಳಿದರೆ ನನಗೆ ಈ ದಿನ ನೆನಪಾಗುತ್ತದೆ.
ಆ ದಿನದ ನಂತರ ನಾನು ಮತ್ತೆ ನನ್ನ ಸ್ನೇಹಿತೆಯ ಅತ್ತೆಯನ್ನಾಗಲಿ ಅವರ ಮಗು(ಗ ) (ಈಗ 6 ವರ್ಷದ ಹುಡುಗ) ನನ್ನಾಗಲಿ ಮತ್ತೆ ನೋಡುವ ಪ್ರಮೇಯ ಎದುರಾಗಲಿಲ್ಲ/ ಎದುರಾಗಿಲ್ಲ .
ಆದರೆ ಖಂಡಿತವಾಗಿಯೂ ಮುಂದೊಂದು ದಿನ ಆ ಹುಡುಗ ಸಿಕ್ಕರೆ ಅವನಲ್ಲಿ ಹೇಳ ಬೇಕಾದುದೊಂದಿದೆ .
ಹೇಯ್ ! ನೀನು ಹುಟ್ಟಿದ ದಿನ ನನ್ನ ಕಣ್ಣು ತೆರೆಸಿದೆ ಎಂದು!!
~
ಅಪೂರ್ವ

No comments:
Post a Comment